savithaprabhakar@rediffmail.com
+ 91 9845931410

ಪುಸ್ತಕಗಳ ಪರಿಚಯ

ಪುಸ್ತಕಗಳ ಪರಿಚಯ

ಪುಸ್ತಕಗಳ ಪರಿಚಯ

ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ

ಸಂಪಾದಿತ ಕೃತಿಗಳು

ಸಂಪಾದಿತ ಕೃತಿಗಳು

2011

2011 ರಲ್ಲಿ ಲೇಖಕಿಯರ ಸ್ನೇಹಬಳಗದ ಮೂಲಕ ಸಂಕಲನಗೊಂಡಿರುವ ಲೇಖಕಿಯರ 'ಕಥಾಸಂಚಯ ಭಾಗ – 1' ಕ್ಕೆ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಪುಸ್ತಕಕ್ಕೆ ಶ್ರೀಮತಿ ಸಿ.ಎನ್.ಮುಕ್ತಾರವರು ಸಂಪಾದಕರಾಗಿದ್ದು ಶ್ರೀಮತಿಯರಾದ ಸವಿತಾಪ್ರಭಾಕರ್ ಮತ್ತು ಬಿ.ಆರ್.ನಾಗರತ್ನ ಅವರು ಉಪಸಂಪಾದಕರಾಗಿದ್ದಾರೆ.

ಈ ಕಥಾ ಸಂಚಯದಲ್ಲಿ ಒಟ್ಟು 36 ಕಥೆಗಳಿವೆ. ಈ ಸಂಕಲನದಲ್ಲಿ ನಾಡಿನ ಹಿರಿಯ ಲೇಖಕಿಯರಾದ ನೀಳಾದೇವಿ, ಉಷಾ.ಪಿ.ರೈ., ಸಬಿಹಾಭೂಮಿಗೌಡ, ಗೀತಾಸೀತಾರಾಂ, ಸಿ.ಎನ್.ಮುಕ್ತಾ, ವಸುಮತಿ ಉಡುಪ ಅವರ ಕಥೆಗಳು ಇವೆ. ಅಲ್ಲದೇ ಇತರ ಅನೇಕ ಸುಪ್ರಸಿದ್ಧ ಲೇಖಕಿಯರ ಕಥೆಗಳೂ ಸೇರಿವೆ. ಇದು ಲೇಖಕಿಯರ ಮೆಚ್ಚಿನ ಕಥಾಸಂಕಲನವಾದದ್ದರಿಂದ ಲೇಖಕಿಯರು ಆ ಕಥೆ ಬರೆಯಲು ಪ್ರೇರಣೆ ಏನು? ಮತ್ತು ಆ ಕಥೆ ತಮಗೆ ಯಾಕೆ ಮೆಚ್ಚುಗೆ ಎಂಬುದನ್ನು ತಿಳಿಸಿರುವುದರಿಂದ ಈ ಕಥಾ ಸಂಚಯ ವಿಶಿಷ್ಟವಾಗಿದೆ.

ಈ ಕಥಾಗುಚ್ಛದ ಕಡೆಯ ನಾಲ್ಕು ಕಥೆಗಳ ಲೇಖಕಿಯರು ಇಹದಲ್ಲಿ ಇಲ್ಲವಾದರೂ ಸಾಹಿತ್ಯದ ಮೂಲಕ ಬದುಕಿರುವಂತಹವರು. ಈ ಭಾಗದಲ್ಲಿ ಶ್ರೀಮತಿಯರಾದ ತ್ರಿವೇಣಿ, ವಾಣಿ, ಪ್ರೇಮಲತಾ ಸುಂದರೇಶ ಹಾಗೂ ಗಂಗಾರಾಜ ಪುರೋಹಿತ ಅವರ ಕಥೆಗಳು ಸೇರಿವೆ.

ಈ ಕೃತಿಯನ್ನು ಓದಿ ಮುನ್ನುಡಿ ಬರೆದು ಶುಭಹಾರೈಸಿರುವವರು ಹಿರಿಯ ಸಾಹಿತಿ ಡಾ.ಕೆ.ಎಸ್.ರತ್ನಮ್ಮನವರು ಈ ಸಂಕಲನದ ಪ್ರಕಾಶಕರು ಬೆಂಗಳೂರಿನ 'ಗೀತಾಂಜಲಿ ಪಬ್ಲಿಕೇಷನ್ಸ್' ರವರು.

2012

2012 ರಲ್ಲಿ 'ಮಕ್ಕಳ ಕಥಾ ಪ್ರಪಂಚ' ಪ್ರಕಟವಾಗಿದೆ. ಈ ಪುಸ್ತಕಕ್ಕೆ ಸ್ನೇಹಬಳಗದ ಶ್ರೀಮತಿ ಸವಿತಾಪ್ರಭಾಕರ್ ರವರು ಸಂಪಾದಕರಾಗಿಯೂ, ಶ್ರೀಮತಿ ಸಿ.ಎನ್.ಮುಕ್ತಾ ಮತ್ತು ಶ್ರೀಮತಿ ಬಿ.ಆರ್. ನಾಗರತ್ನ ಅವರುಗಳು ಸಹ-ಸಂಪದಕರಾಗಿ ಕೆಲಸಮಾಡಿದ್ದಾರೆ.

ಈ ಸಂಚಯಕ್ಕೆ 42 ಲೇಖಕಿಯರು ಕಥೆಗಳನ್ನು ಬರೆದಿದ್ದಾರೆ. ಈ ಕೃತಿಗೆ 'ತರಂಗ' ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಶ್ರೀಮತಿ ಸಂದ್ಯಾ. ಎಸ್.ಪೈ. ರವರು ಮುನ್ನುಡಿಯನ್ನು ಬರೆದಿದ್ದಾರೆ. 'ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸುವ ಕೈಗಳು ಇನ್ನೂ ಬರಿದಾಗಿಲ್ಲ ಎಂಬುದನ್ನು ಈ ಸಂಕಲನ ಸಾರಿ ಹೇಳುತ್ತಿದೆ' ಎಂದು ತಮ್ಮ ಅನಿಸಿಕೆಯನ್ನು ತಿಳಿಸಿ ಕಥೆಗಾರ್ತಿಯರಿಗೆ ಹಾಗೂ ಸ್ನೇಹ ಬಳಗದ ಸೋದರಿಯರಿಗೆ ತಮ್ಮ ಪ್ರೀತಿಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಮಕ್ಕಳ ಕಥಾ ಸಂಚಯದಲ್ಲಿ ಶ್ರೀಮತಿಯರಾದ ನಿರುಪಮಾ, ವೈದೇಹಿ, ರೇಖಾಕಾಖಂಡಕಿ, ಪ್ರೇಮಾಭಟ್, ಬಿ.ಎಸ್.ರುಕ್ಕಮ್ಮ, ಎ.ಪಿ.ಮಾಲತಿ ಮುಂತಾದ ಹಿರಿಯ ಲೇಖಕಿಯರ ಕಥೆಗಳಲ್ಲದೇ ಉದಯೋನ್ಮುಖ ಬರಹಗಾರ್ತಿಯರ ಕಥೆಗಳೂ ಸೇರಿವೆ. ಕನ್ನಡ ಮನಸ್ಸಿನ ಎಲ್ಲಾ ಸಾಹಿತ್ಯ ಪ್ರಿಯರಿಗೂ ಇದು ಇಷ್ಟವಾಗುವ ಪುಸ್ತಕ.

2012 ರಲ್ಲಿ 'ಮಕ್ಕಳ ಮೋಜಿನ ಕಥೆಗಳು' ಪ್ರಕಟವಾಗಿದೆ. ಈ ಕೃತಿಗೂ ಸಹ ಸ್ನೇಹಬಳಗದ ಸ್ನೇಹಿತೆಯರಾದ ಶ್ರೀಮತಿ ಸಿ.ಎನ್.ಮುಕ್ತಾ, ಶ್ರೀಮತಿ ಸವಿತಾಪ್ರಭಾಕರ್ ಮತ್ತು ಶ್ರೀಮತಿ ಬಿ.ಆರ್.ನಾಗರತ್ನ ಕೆಲಸಮಾಡಿದ್ದಾರೆ.

ಈ ಪುಸ್ತಕದ ಸಂಪಾದಕರು ಸವಿತಾಪ್ರಭಾಕರ್, ಶ್ರೀಮತಿಯರಾದ ಸಿ.ಎನ್.ಮುಕ್ತಾ ಮತ್ತು ಬಿ.ಆರ್. ನಾಗರತ್ನ ಸಹಸಂಪಾದಕರು.

'ಮಕ್ಕಳ ಮೋಜಿನ ಕಥೆಗಳು' ಕೃತಿಗೆ 'ಅಮೇರಿಕನ್ನಡ' ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಮೈಸೂರಿನ ಶ್ರೀಮತಿ ನಾಗಲಕ್ಷ್ಮಿಹರಿಹರೇಶ್ವರ್ ಮುನ್ನುಡಿ ಬರೆದಿದ್ದಾರೆ. 'ಇದರಲ್ಲಿರುವ ಕಥೆಗಳು ಎಲ್ಲಾವರ್ಗದ ಮಕ್ಕಳ ಕುತೂಹಲವನ್ನು ತಣಿಸುತ್ತದೆ. ಕನ್ನಡ ಸಾಹಿತ್ಯ ಭಂಡಾರಕ್ಕೆ ಇಂತಹ ಒಂದು ಅಮೂಲ್ಯ ಕಥಾಸಂಕಲನ ನೀಡಿದ ಲೇಖಕಿಯರು ಮತ್ತು ಸ್ನೇಹಬಳಗದ ಸಂಪಾದಕಿಯರು ಅಭಿನಂದನಾರ್ಹರು' ಎಂದಿದ್ದಾರೆ ಶ್ರೀಮತಿ ನಾಗಲಕ್ಷ್ಮಿಯವರು.

ಈ ಕೃತಿಯಲ್ಲೂ 42 ಜನ ಲೇಖಕಿಯರ ಕಥೆಗಳು ಸೇರಿವೆ. ಶ್ರೀಮತಿಯರಾದ ನೀಳಾದೇವಿ, ಡಾ. ಅನಸೂಯಾ ದೇವಿ, ವಸುಮತಿ ಉಡುಪ, ಡಾ. ವರದಾ ಶ್ರೀನಿವಾಸ, ಡಾ. ಹೆಚ್.ಗಿರಿಜಮ್ಮ ... ಮುಂತಾದ ಹಿರಿಯ ಲೇಖಕಿಯರಲ್ಲದೇ ಅನೇಕ ಉದಯೋನ್ಮುಖ ಬರಹಗಾರರು ಕೂಡ ತುಂಬಾ ಸ್ವಾರಸ್ಯವಾದ ಕಥೆಗಳನ್ನು ರಚಿಸಿದ್ದಾರೆ.

2012 ರಲ್ಲಿ ಪ್ರಕಟವಾದ 'ಕವನಗುಚ್ಛ' ಕೃತಿಗೆ ಸವಿತಾಪ್ರಭಾಕರ್ ಸಹಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಈ ಪುಸ್ತಕಕ್ಕೆ ಸ್ನೇಹಬಳಗದ ಬಿ.ಆರ್.ನಾಗರತ್ನ ಸಂಪಾದಕರಾಗಿಯೂ ಸಿ.ಎನ್.ಮುಕ್ತಾ ಮತ್ತು ಸವಿತಾಪ್ರಭಾಕರ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.

80 ಲೇಖಕಿಯರು ಬರೆದ ಕವನಗಳು ಇಲ್ಲಿವೆ. ನಾಡೋಜ ಡಾ.ಕಮಲಾ ಹಂಪನಾ, ಡಾ. ಲತಾ ರಾಜಶೇಖರ್, ಡಾ. ವಿಜಯಶ್ರೀ ಸಬರದ, ಡಾ. ಸಬಿಹಾ ಭೂಮಿಗೌಡ... ಮುಂತಾದವರ ಕವನಗಳು ಇಲ್ಲಿ ಸೇರಿವೆ.

ಈ ಕೃತಿಗೆ ಪ್ರೊ.ಚ.ಸರ್ವಮಂಗಳ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ.


2013

2013 ರಲ್ಲಿ ಪ್ರಕಟವಾಗಿರುವ 'ಲೇಖಕಿಯರ ಕಥಾಸಂಚಯ ಭಾಗ-2 ಮತ್ತು ಭಾಗ-3' ಕ್ಕೆ ಸಹಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಈ ಪುಸ್ತಕಕ್ಕೆ ಸ್ನೇಹಬಳಗದ ಸಿ.ಎನ್.ಮುಕ್ತಾರವರು ಪ್ರಧಾನ ಸಂಪಾದಕರಾಗಿಯೂ ಸವಿತಾ ಪ್ರಭಾಕರ್ ಮತ್ತು ಬಿ.ಆರ್.ನಾಗರತ್ನ ಅವರು ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಭಾಗ-2 ಕ್ಕೆ ಖ್ಯಾತ ಕವಿಗಳಾದ ಶ್ರೀ ಜಯಪ್ಪ ಹೊನ್ನಾಳಿಯವರು ಮತ್ತು ಭಾಗ-3 ಕ್ಕೆ ಸಾಹಿತಿ ಮತ್ತು ಸಂಪಾದಕರಾದ ಶ್ರೀನಿದಸಾಲೆ ಪುಟ್ಟಸ್ವಾಮಯ್ಯನವರು ಮುನ್ನುಡಿ ಬರೆದು ಶುಭಹಾರೈಸಿದ್ದಾರೆ.

ಈ ಕಥಾ ಸಂಚಯಗಳಲ್ಲಿ ಶ್ರೀಮತಿಯರಾದ ಎಚ್.ಎಸ್.ಪಾರ್ವತಿ, ದೇವಕಿಮೂರ್ತಿ, ನುಗ್ಗೆಹಳ್ಳಿ ಪಂಕಜ, ಭಾಗೀರಥಿ ಹೆಗಡೆ, ನಾಡೋಜ ಡಾ. ಕಮಲ ಹಂಪನಾ ಅವರುಗಳ ಕಥೆಗಳಲ್ಲದೇ ಇನ್ನೂ ಹಲವಾರು ಪ್ರಸಿದ್ಧ ಲೇಖಕಿಯರ ಕಥೆಗಳು ಮತ್ತು ಉದಯೋನ್ಮುಖ ಬರಹಗಾರರ ಕಥೆಗಳು ಸೇರಿವೆ.


2014

2014 ರಲ್ಲಿ ‘ಹಾಸ್ಯದ ಹೊನಲು’ ಎಂಬ ಹಾಸ್ಯ ಲೇಖನಗಳ ಸಂಕಲನ ಪ್ರಕಟವಾಗಿದೆ.ಇದಕ್ಕೆ ಸ್ನೇಹಬಳಗದ ಸವಿತಾ ಪ್ರಭಾಕರ್ ಅವರು ಪ್ರಧಾನ ಸಂಪಾದಕರಾಗಿಯೂ, ಸಿ.ಎನ್.ಮುಕ್ತಾ ಮತ್ತು ಬಿ.ಆರ್.ನಾಗರತ್ನ ಅವರು ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.ಈ ಸಂಚಯದಲ್ಲಿ 43 ಲೇಖಕಿಯರ ಹಾಸ್ಯ ಲೇಖನಗಳಿವೆ. ಈ ಪುಸ್ತಕಕ್ಕೆ ಪ್ರಸಿದ್ಧ ಸಾಹಿತಿ ಶ್ರೀ ವೈ.ಎನ್ .ಗುಂಡೂರಾವ್ ಅವರು ಮುನ್ನುಡಿ ಬರೆದು ಶುಭ ಹಾರಯಿಸಿದ್ದಾರೆ.

2014 ರಲ್ಲಿ ಲೇಖಕಿಯರ ‘ಅನುವಾದಿತ ಕಥೆಗಳ ಸಂಚಯ’ ಪ್ರಕಟವಾಗಿದೆ. ಇದಕ್ಕೆ ಸ್ನೇಹಬಳಗದ ಬಿ.ಆರ್.ನಾಗರತ್ನ ಅವರು ಪ್ರಧಾನ ಸಂಪಾದಕರಾಗಿಯೂ, ಸಿ.ಎನ್.ಮುಕ್ತಾ ಮತ್ತು ಸವಿತಾ ಪ್ರಭಾಕರ್ ಅವರು ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಈ ಕೃತಿಗೆ ಖ್ಯಾತ ಲೇಖಕಿ ಶ್ರೀಮತಿ ಎ. ಪಿ. ಮಾಲತಿಯವರು ಮುನ್ನುಡಿ ಬರೆದು ಶುಭ ಕೋರಿದ್ದಾರೆ.


2015

2015 ರಲ್ಲಿ 'ಲೇಖಕಿಯರ ಕಥಾ ಸಂಚಯ ಭಾಗ-4' ಪ್ರಕಟವಾಗಿದೆ. ಈ ಪುಸ್ತಕಕ್ಕೆ ಶ್ರೀಮತಿ ಸಿ.ಎನ್.ಮುಕ್ತಾರವರು ಪ್ರಧಾನ ಸಂಪಾದಕರಾಗಿಯೂ , ಶ್ರೀಮತಿ ಸವಿತ ಪ್ರಭಾಕರ್ ಮತ್ತು ಶ್ರೀಮತಿ ರಾಜೇಶ್ವರಿ ಭಾರತಿಯವರು ಸಹ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.ಈ ಕೃತಿಗೆ ಖ್ಯಾತ ಸಾಹಿತಿ ಬಿ.ಎಲ್.ವೇಣುರವರು ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ.ಬೆಂಗಳೂರಿನ ಗೀತಾಂಜಲಿ ಪಬ್ಲಿಕೇಷನ್ಸ್ ರವರು ಈ ಕೃತಿಯನ್ನು ಹೊರ ತಂದಿದ್ದಾರೆ.